Admissions Open 2024-25: BE-KEA-CET Code: E076 | PG-M.Tech.-DEC-KEA PGCET Code:T966 | PG-MBA: KEA PGCET Code: B246

aictes

Masters in Business Administration


ಪಿಡಿಐಟಿಯಲ್ಲಿ ‘ಸಿಂಚನ -2025’ ಪದವಿ ದಿನಾಚರಣೆ ಸಮಾರಂಭ
ದಿನಾಂಕ 17/5/2025
ತಂತ್ರಜ್ಞಾನದಲ್ಲಿ ಮುನ್ನಡೆಗೆ ಪ್ರಾಯೋಗಿಕ ಕೌಶಲ್ಯ ಅವಶ್ಯಕ – ಡಾ. ಮಹಾದೇವ ಪ್ರಸನ್ನ
ಆನ್ಲೈನ್ ಪದವಿ ಎಷ್ಟು ಸೂಕ್ತ ! -ಡಾ. ಮಹಾದೇವ್ ಪ್ರಸನ್ನ
ಜ್ಞಾನಶಕ್ತಿ ರಾಷ್ಟ್ರಶಕ್ತಿ ಆಗಬೇಕು- ಕರಿಬಸವರಾಜ್ ಬಾದಾಮಿ

ಆನ್ಲೈನ್ ಪದವಿ ಎಷ್ಟು ಸೂಕ್ತ, ಕಲಿಕೆ ಎನ್ನುವುದು “ಇಂದಿನ ಇಂಟರ್ನೆಟ್ ಯುಗದಲ್ಲಿ ಕಲಿಕೆಗೆ ಹೆಚ್ಚಿನ ಅವಕಾಶಗಳಿವೆ. ಆದರೆ ನಿರ್ದಿಷ್ಟ ಪಠ್ಯಕ್ರಮದ ಕ್ರಮದ ಕೊರತೆಯಿಂದ ಅದು ಸಮರ್ಥವಾಗಿ ಉಪಯೋಗವಾಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಅಗತ್ಯತೆಗಳನ್ನು ಗುರುತಿಸಿ, ಸೂಕ್ತ ಆನ್‌ಲೈನ್ ಸಂಪನ್ಮೂಲಗಳನ್ನು ಆರಿಸಿಕೊಂಡು ಕಲಿಕೆಯನ್ನು ಮುಂದುವರಿಸಿದರೆ ಕೌಶಲ್ಯ ಸಂಪಾದನೆ ಸಾಧ್ಯ” ಎಂದು ಡಾ.ಮಹಾದೇವ ಪ್ರಸನ್ನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ‘ಸಿಂಚನ -2025’ರ ಅಂಗವಾಗಿ ದಿನಾಂಕ 17/5/2025 ಶನಿವಾರದಂದು ಬೆಳಗ್ಗೆ 10:00ಕ್ಕೆ ಪದವಿ ದಿನಾಚರಣೆಯನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಐಐಐಟಿ ಧಾರವಾಡದ ನಿರ್ದೇಶಕರಾದ ಡಾ.ಎಸ್ ಆರ್ ಮಹಾದೇವ ಪ್ರಸನ್ನ ಅವರು ಮಾತನಾಡಿದರು.
ಮುಂದುವರೆದು ತಂತ್ರಜ್ಞಾನದ ಅಡೆತಡೆ ದಾಟಲು ಪ್ರಾಯೋಗಿಕ ಕೌಶಲ್ಯದ ಅಗತ್ಯತೆ ಇದೆ. ಪದವಿ ಶಿಕ್ಷಣ ಅಪೂರ್ಣತೆಯಿಂದ ಕೂಡಿದ್ದು, ಬಹುತ್ವ ಕೇಂದ್ರಿತ ಕಲಿಕೆಯಿಂದ ಈ ಅಪೂರ್ಣತೆಯನ್ನು ದಾಟಬೇಕು. ಡೇಟಾ ಸೈನ್ಸ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಈ ತಂತ್ರಜ್ಞಾನದ ಅಡೆತಡೆಗಳನ್ನು ನಿವಾರಿಸಲು ನೆರವಾಗುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಡ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕರಿಬಸವರಾಜ್ ಬಾದಾಮಿ ಮಾತನಾಡಿ, "ವಿದ್ಯಾರ್ಥಿಗಳು ಪದವಿ ಪಡೆದ ಮಾತ್ರಕೆ ಉದ್ಯೋಗಕ್ಕೆ ಅರ್ಹತೆ ಪಡೆಯುವದಿಲ್ಲ. ತಮ್ಮನ್ನು ತಾವು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಬೇಕು. ಈ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳ ಜೊತೆ ಸಂಹವನ ನಡೆಸಿ ಅವರ ಅನುಭವದ ಲಾಭ ಪಡೆಯಬೇಕು. ಕಾಲೇಜಿನ ಜೊತೆಗಿನ ಭಾವನಾತ್ಮಕ ಸಂಬಂಧ ಹಾಗೆಯೇ ಮುಂದುವರೆಯಬೇಕು. ಇವತ್ತು ಸ್ವದೇಶೀ ನಿರ್ಮಿತ ಯುದ್ಧ ಸಾಮುಗ್ರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿಯ ಯಶಸ್ಸಿನಿಂದ ಅನೇಕ ದೇಶಗಳು ನಮ್ಮ ರಕ್ಷಣಾ ವಿಭಾಗವನ್ನು ಸಂಪರ್ಕಿಸಿವೆ. ಅಂತಹ ಕ್ಷೇತ್ರದಲ್ಲಿ ಈಗಿನ ಇಂಜಿನಿಯರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜ್ಞಾನಶಕ್ತಿ ರಾಷ್ಟ್ರಶಕ್ತಿ ಆಗಬೇಕು. ನಮ್ಮ ಶಿಕ್ಷಣ ಸಂಸ್ಥೆಯಿಂದ ಐಎಎಸ್/ಐ,ಪಿ.ಎಸ. ಅಕಾಡೆಮಿ ಕೋಚಿಂಗ್ ಕೊಡುವ ಯೋಜನೆ ಇದೆ ಎಂದು ತಿಳಿಸಿದರು.
ಪಿಡಿಐಟಿಯ ಪ್ರಾಂಶುಪಾಲರಾದ ಡಾ.ರೋಹಿತ್ ಯು.ಎಂ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಅವರು ನೂತನ ಪದವಿಧರರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಪದವಿ ದಿನಾಚರಣೆಯ ಸಂಯೋಜಕರಾದ ಪ್ರೊ. ಮಾಲತೇಶ ಕಮತರ್ ಅತಿಥಿಗಳನ್ನು ಪರಿಚಯಿಸಿದರು. ಈ ಸಮಾರಂಭದ ಅಂಗವಾಗಿ ಎನ್.ಸಿ.ಸಿ. ಪಡೆಗಳ ಜೊತೆಯಲ್ಲಿ ಪದವಿ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಸಲಾಯಿತು. ಮುಖ್ಯ ಅತಿಥಿಗಳಿಗೆ ಸನ್ಮಾನವನ್ನು ಸಲ್ಲಿಸಲಾಯಿತು. 400 ಕ್ಕೂ ಹೆಚ್ಚು ಬಿ.ಇ. ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು
ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಐ ಎನ್ ಸಂಗನಬಸಪ್ಪ, ಶ್ರೀ ಅನಿಲ್ ಆರ್ ಜವಳಿ, ಶ್ರೀ ಬಿ ಚಂದ್ರಮೌಳಿ, ಹಾಗೂ ವೀ ವೀ ಸಂಘದ ಕಾರ್ಯಕಾರಿ ಮಂಡಳಿಯ ಮಾಜಿ ಸದಸ್ಯರಾದ ಶ್ರೀ ವಿರೂಪಾಕ್ಷ ರೆಡ್ಡಿ, ಪ್ರಾಂಶುಪಾಲರಾದ ಡಾ.ರೋಹಿತ್ ಯು.ಎಂ., ಉಪಪ್ರಾಂಶುಪಾಲರಾದ ಡಾ.ಪಾರ್ವತಿ ಕಡ್ಲಿ ಹಾಗೂ ’ಸಿಂಚನ 2025’ ಕಾರ್ಯಕ್ರಮದ ಸಂಯೋಜಕರಾದ ಡಾ.ವಸಂತಮ್ಮ ಹೆಚ್ ಮತ್ತು ಪದವಿ ದಿನಾಚರಣೆಯ ಸಂಯೋಜಕರಾದ ಪ್ರೊ. ಮಾಲತೇಶ ಕಮತರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯರು ನಾಡಗೀತೆಯೊಂದಿಗೆ ಪ್ರಾರ್ಥಿಸಿದರು, ಪ್ರೊ.ಇಂದಿರಾ ಹಾಗೂ ಪ್ರೊ.ಮಘಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ.ಫಿರ್ದೋಶ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ಡಾ.ಪ್ರತಾಪ್ ಕುಲಕರ್ಣಿ & ಪ್ರೊ.ಮಧ್ವರಾಜ್ ಕೊಲ್ಹಾಪುರ್ (Ph: 9448539913)
ಛಾಯಾಗ್ರಹಣ : ಪ್ರೊ.ಸಿದ್ಧಲಿಂಗೇಶ್ವರ್
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ.